ದೃಶ್ಯಕ್ಕೊಂದು ನುಡಿಗಟ್ಟು

ನಮ್ಮ ಬಗ್ಗೆ

ಸಂವಾದ ಡಾಟ್ ಕಾಂ ಕುರಿತು


ಸಿನಿಮಾ ನಮ್ಮ ಸಂಸ್ಕೃತಿಯ ಒಂದು ಪ್ರಮುಖ ಭಾಗ. ಕೆಲವೊಮ್ಮೆ ಸಣ್ಣ ಕಿಂಡಿಯಂತೆ ಸೂಕ್ಷ್ಮ ಸಂಕೀರ್ಣ, ಮತ್ತು ನಿಗೂಢ, ಕೆಲವೊಮ್ಮೆ ಕನ್ನಡಿಯಂತೆ, ಸ್ಪಷ್ಟ, ಸರಳ. ಒಂದು ಕಲೆ ಮತ್ತು ಮನರಂಜನೆಯ ಮಾಧ್ಯಮವಾಗಿ, ಬೇರೆಯದೇ ಕಾಲದ ಸಿನಿಮಾಗಳ ಪ್ರಭಾವದಿಂದ ಸಮಕಾಲೀನ ಸಿನಿಮಾಗಳನ್ನು, ಸಮಕಾಲೀನ ಪ್ರೇಕ್ಷಕರ ಒಳನೋಟಗಳಿಂದ ಹಿಂದಿನ ಕಾಲದ ಸಿನಿಮಾಗಳನ್ನು ವಿಶ್ಲೇಶಿಸುವ ಮೂಲಕ, ಮಾಧ್ಯಮ ಹಿಂದಿನ ಹಾಗೂ ಇಂದಿನ ಬೇರುಗಳನ್ನು ಒಟ್ಟಿಗೆ ಹೊಂದಿದೆ.
ಕಲೆಯ ಒಂದು ವಿಶಿಷ್ಟ ಮಾಧ್ಯಮದ ಇಂತಹ ಸೂಕ್ಷ್ಮಗಳಿಂದ ಪ್ರೇರಿತರಾದ ನಾವು ಸಿನಿಮಾದ ಜೊತೆ ನಮ್ಮ ನಂಟನ್ನು ಇನ್ನಷ್ಟು ವಿಸ್ತರಿಸಿ, ಚಿತ್ರನಿರ್ಮಾಣ ಮತ್ತು ಚಿತ್ರ ವೀಕ್ಷಣೆಯಲ್ಲಿ ನಮ್ಮ ಒಳನೋಟಗಳನ್ನು ಅಭಿವೃದ್ಧಿಪಡಿಸುಕೊಳ್ಳುವುದರಲ್ಲಿ ಆಸಕ್ತಿ ಹೊಂದಿರುವವರು. ಸಿನಿಮೀಯ ಪರಿಭಾಷೆಯಲ್ಲಿನ ನಮ್ಮ ತಿಳುವಳಿಕೆ, ಮಾಹಿತಿ, ಹಾಗು ಕಲಿಕೆಯನ್ನು ಹಂಚಿಕೊಳ್ಳಲು ಆಸಕ್ತರಾದ ನಾವು ಸೇರಿ ಮಾಡಿಕೊಂಡಿರುವ ಸಂಸ್ಥೆಯೇ ಸಂವಾದ ಡಾಟ್ ಕಾಂ. ಸಿನಿಮಾ ಪರಿಭಾಷೆಯನ್ನು ಪರಿಚಯಿಸುತ್ತಾ ಚಲನಚಿತ್ರ ಸಮುದಾಯದಲ್ಲಿ ಪರ್ಯಾಯ ಚಿತ್ರಗಳನ್ನು ಪರಿಗಣಿಸುವಂತೆ ಮಾಡುವುದು, ಸಿನಿಮಾ ಕುರಿತಾದ ಉತ್ತಮ ಪಠ್ಯವನ್ನು ತಯಾರಿಸುವುದು, ದೃಶ್ಯ ಮಾಧ್ಯಮ ಸಂಬಂಧಿತ ಇತರೆ ಕಲೆಗಳ ಅಭಿವೃದ್ಧಿ ಮತ್ತು ಸಹಾಯ ಇವಿಷ್ಟು ನಮ್ಮ ಗುರಿ. ಮುಂದುವರಿದಂತೆ ಸಂವಾದ ಸಮುದಾಯದ ಪ್ರಾಥಮಿಕ ಆಸಕ್ತಿ ದೃಶ್ಯ ಮಾಧ್ಯಮ ಮತ್ತು ಪ್ರದರ್ಶನ ಕಲೆಗಳ ಪ್ರಚಾರ ಮತ್ತು ಪ್ರೋತ್ಸಾಹ. ನಮ್ಮ ಉದ್ದೇಶಗಳ ಸಾರಂಶ ಕೆಳಕಂಡಂತಿದೆ -·            ಪರ್ಯಾಯ ಚಿತ್ರಗಳಲ್ಲಿ ಪ್ರವೇಶವನ್ನು ವಿಸ್ತರಿಸುವ ಮೂಲಕ ರಾಜ್ಯದ ಸಾಂಸ್ಕೃತಿಕ ಸಂಪನ್ಮೂಲಗಳನ್ನು ಉತ್ಕೃಷ್ಟಗೊಳಿಸುವುದು.


·            ಸಿನಿಮಾ ಕುರಿತಾದ ಉತ್ತಮ ಬರಹಗಳನ್ನು ಪುಸ್ತಕ ರೂಪದಲ್ಲಿ ಹಾಗು ವೆಬ್ ನಲ್ಲಿ ಪ್ರಕಟಿಸುವುದು.


·            ನಮ್ಮ ನಡುವೆ ಹಾಗು ಸಮುದಾಯದಲ್ಲಿ ಚಲನಚಿತ್ರ ಮಾಧ್ಯಮದ ಆಳವಾದ ತಿಳುವಳಿಕೆಯನ್ನು ಉತ್ತೇಜಿಸುವುದು.


·            ಪರಿಣಾಮಕಾರಿಯಾದ ವಿವಿಧ ಮಾರ್ಗಗಳ ಮೂಲಕ ಸಿನಿಮಾ ನಿರ್ದೇಶನ ಹಾಗು ನಿರ್ಮಾಣ ತಂಡಗಳ ಜೊತೆ ಸಮುದಾಯದ ಸದಸ್ಯರ ಚರ್ಚೆಗಳನ್ನು ಏರ್ಪಡಿಸುವುದು.


·                   ಲಾಭೋದ್ದೇಶವಿಲ್ಲದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘವಾಗಿರುವುದಲ್ಲದೆ, ಹಣಕಾಸಿನ ಹೊಣೆಗಾರಿಕೆಯಲ್ಲಿ


·             ಹೆಚ್ಚಿನ ಗುಣಮಟ್ಟವನ್ನು ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು.


·             ಸದಸ್ಯರ ನಡುವೆ ಸಕ್ರಿಯ ಸ್ವಯಂಸೇವಕ ಸಮಾಜದ ಚೈತನ್ಯವನ್ನು ಪ್ರೋತ್ಸಾಹಿಸುವುದು.


·             ಸ್ವತಂತ್ರ ಚಲನಚಿತ್ರ ಮತ್ತು ಇತರ ದೃಶ್ಯ ಕಲೆಗಳ ಅಭಿವೃದ್ಧಿ ನೀಡುವ ಮೂಲಕ ನಮ್ಮ ಸಮುದಾಯವನ್ನು ಹೆಚ್ಚು ಜೀವಂತಗೊಳಿಸುವುದು.


    ಇನ್ನಷ್ಟು ಲೇಖನಗಳು