ದೃಶ್ಯಕ್ಕೊಂದು ನುಡಿಗಟ್ಟು

From Underground

ಯುವ ಕತೆಗಾರ ಗೌತಮ್ ಜ್ಯೋತ್ಸ್ನಾ ನಿರ್ಮಿಸಿ ನಿರ್ದೇಶಿಸಿರುವ ಈ ಅಸಂಗತ ಕಿರು ಚಿತ್ರದ ಹೆಸರು- From Underground.

ಪೌರಸ್ತ್ಯ ಮನಸ್ಸುಗಳ ಮೇಲೆ ಪಾಶ್ಚಿಮಾತ್ಯ ಚಿಂತನೆಗಳು ಪ್ರಭಾವ ಬೀರಿದಾಗ ಸಂಭವಿಸಬಹುದಾದ ದುರಂತವನ್ನು ಈ ಚಿತ್ರ ರೋಚಕವಾಗಿ ಕಟ್ಟಿಕೊಡುತ್ತದೆ. 

ನಿರ್ದೇಶಕ ಗೌತಮ್ ಜ್ಯೋತ್ಸ್ನಾ ಚಿತ್ರದ ಕುರಿತು ಹೀಗೆ ಹೇಳುತ್ತಾರೆ..

"ಈ ಐಡಿಯ ನನಗೆ ಹೊಳೆದದ್ದು, ಫ಼ೇಸ್ಬುಕ್ ಜಾಣ-ಜಾಣೆಯರು, ಕೆಲವೊಮ್ಮೆ ದೊಡ್ಡ ಕವಿಗಳ ಕವಿತೆಗಳನ್ನೂ, ಕೆಲವೊಮ್ಮೆ ತಮ್ಮದೇ ಕವಿತೆಗಳನ್ನು ವಾಚಿಸಿ ಅಪ್ಲೋಡ್ ಮಾಡುತ್ತಿದ್ದಾಗ... ಆಗಷ್ಟೇ ನನಗೆ ಭಾಷಾಭಾರತಿಯವರು ಕೊಟ್ಟಿದ್ದ ಅಸೈನ್ಮೆಂಟ್ ಮುಗಿಯುವ ಹಂತದಲ್ಲಿತ್ತು. ದಸ್ತವೇಸ್ಕಿಯನ್ನು ಹೊಸದಾಗಿ ಪರಿಚಚಿಸುವ ಹಠವಿತ್ತು ನನಗೆ. ಆಗ ಹೀಗೊಂದು ಕಲ್ಪನೆ ಕವಲೊಡೆಯಿತು. ಇಲ್ಲಿ ಅಂದರೆ ನಮ್ಮ ರಾಜ್ಯದಲ್ಲಿ ಕಾಫ಼ಿ ಹೌಸಿನ ಕವಿಗಳಿಗೆ ಪ್ರಧಾನ ಸ್ಥಾನವಿದೆ. ಅಂದರೆ ವೆಸ್ಟ್ರನ್ ಚಿಂತನೆಯನ್ನು ಇಲ್ಲಿಗೆ ಹೆಚ್ಚು ಪರಿಚಯಿಸಿದವರು ಅವರು ಎನ್ನಬಹುದು. ಆದರೆ ಇದರ ಪರಿವೇ ಇರದೆ, ಇತ್ತೀಚಿಗೆ ಪಶ್ಚಿಮ ಮತ್ತು ಪೂರ್ವ ಆಲೋಚನೆಗಳನ್ನು ಹೆಣೆಯಲು ಹೋಗುವ ಯುವಕನಿಗೆ ಸದಾ ಈ ಕಾಫಿ ಬಳಗದ ದಟ್ಟ ನೆರಳಿನಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ ಮತ್ತು ಅದೇ ಆತನನ್ನು ಬಲಿ ಹಾಕುವ ಮಹಾ ರಾಕ್ಷಸ... ಈ ಆಲೋಚನೆಯ ರಮ್ಯ ಚಿತ್ರಣವಿಲ್ಲಿದೆ."

ಚಿತ್ರ ವೀಕ್ಷಿಸಿ ನಿಮ್ಮ ಅಭಿಪ್ರಾಯ ತಿಳಿಸಿ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು