ದೃಶ್ಯಕ್ಕೊಂದು ನುಡಿಗಟ್ಟು

ಸುಂದರನಾಥ ಸುವರ್ಣ ಇನ್ನಿಲ್ಲ.


ನಮ್ಮೂರ ಮಂದಾರ ಹೂವೆಯಲ್ಲಿ ಯಾಣದ ಸೊಬಗನ್ನೂ, ಇಂದ್ರ ಧನುಷ್ ನಲ್ಲಿ ಕಾರವಾರದ ಕಡಲನ್ನೂ ಕ್ಯಾಮೆರಾದಲ್ಲಿ ಹಿಡಿದಿಟ್ಟ ಸುಂದರನಾಥ ಸುವರ್ಣ ಇನ್ನಿಲ್ಲ. ಅಪರೂಪದ ಅತಿಥಿ ಎಂಬ ಚಿತ್ರದೊಂದಿಗೆ ವೃತ್ತಿ ಜೀವನ ಆರಂಭಿಸಿದ ಸುಂದರನಾಥ ಸುವರ್ಣ ಸುಮಾರು ೧೫೦ಕ್ಕೂ ಹೆಚ್ಚು ಸಿನೆಮಾಗಳಿಗೆ ಛಾಯಾಗ್ರಾಹಕರಾಗಿ ದುಡಿದು, ಸಿನೆಮಾ ನಿರ್ಮಾಣ ಮತ್ತು ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದರು. ಅಗ್ನಿಪರ್ವ, ಕಿಲಾಡಿ ತಾತ, ಟೈಗರ್ ಗಂಗು ಅವರ ನಿರ್ದೇಶನದ ಕೆಲವು ಚಿತ್ರಗಳು.

ಇತ್ತೀಚಿನ ಚಿತ್ರಗಳಲ್ಲಿ ತಮಸ್ಸು ಸಿನೆಮಾದಲ್ಲಿನ ಅವರ ಕ್ಯಾಮೆರಾ ಕಸಬುದಾರಿಕೆ ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿತ್ತು.

ತಮ್ಮ ಹೆಸರಿನಂತೆ ಸುಂದರ್ವೂ ಸುವರ್ಣವೂ ಆದ ದೃಶ್ಯಗಳನ್ನ ಕಟ್ಟಿಕೊಟ್ಟ ಸುವರ್ಣರ ಆತ್ಮಕ್ಕೆ ಸಂವಾದ ಡಾಟ್ ಕಾಂ ಶಾಂತಿ ಕೋರುತ್ತದೆ.

 

ಸುವರ್ಣರ ಪ್ರಮುಖ ಚಿತ್ರಗಳು:

ರಾಜಕೀಯ

ನಮ್ಮೂರ ಮಂದಾರ ಹೂವೆ

ಅಮೃತವರ್ಷಿಣಿ

ಗಂಡುಗಲಿ ಕುಮಾರರಾಮ

ಶ್ರೀ ಮಂಜುನಾಥ

ಮುಸ್ಸಂಜೆ ಮಾತು

ಚೆಲ್ಲಾಟ

ಆಪರೇಷನ್ ಅಂತ

ಅನುರಾಗ ಸಂಗಮ

ಗೋಲಿಬಾರ್

 

 

 

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು