ದೃಶ್ಯಕ್ಕೊಂದು ನುಡಿಗಟ್ಟು

`ಅನುಭವ ಅಷ್ಟೆ ಆದರೆ ಸಾಕೆ...’

6-5=2 kannada horror cinema review 6-5=2 ಕನ್ನಡ ಪ್ರೇಕ್ಷಕರ ಮಟ್ಟಿಗೆ ಹೊಸ 'ಅನುಭವ' ನೀಡುವ ಚಿತ್ರ.

ಸಾಧಾರಣ ಕನ್ನಡ ಚಿತ್ರಗಳಲ್ಲಿ ಕಾಣ ಸಿಗುವ ದೆವ್ವ, ಭೂತಗಳ ಕಲ್ಪನೆಯ ಮತ್ತೊಂದು ರೂಪ ನಿಮಗಿಲ್ಲಿ ಕಾಣಿಸಬಹುದು. ಚಿತ್ರ ಹೀಗೆ ತೆಗೆಯಬಹುದಿತ್ತು ಹಾಗೆ ತೆಗೆಯಬಹುದಿತ್ತು ಅಸಲಿ ವಿಡಿಯೋ ಕ್ಲಿಪ್ಪಿಂಗ್ ಎಲ್ಲಿ? ಎಂಬ ಪ್ರಶ್ನೆಗಳಿಗೆ ಉತ್ತರ ಚಿತ್ರ ತಂಡವೇ ನೀಡಬೇಕು. 

ಇನ್ನು ಸೂಪರ್ ನ್ಯಾಚುರಲ್ ಕೆಮರಾ.. ಅದರ ಬ್ಯಾಟರಿ ಲೈಫ್ ಬಗ್ಗೆ ಉತ್ತರ ಹುಡುಕುತ್ತಾ ಇರಿ.. ಇಂಗ್ಲೀಷ್ ನಲ್ಲಿ ಈ ರೀತಿ ಚಿತ್ರಗಳು ಬಹಳಷ್ಟು ನೋಡಿದ್ದರೂ ನಮ್ಮಲ್ಲಿ ಈ ರೀತಿ ಪ್ರಯತ್ನ ಆಗಿದೆ ಎಂಬುದು ಉತ್ತಮ ಬೆಳವಣಿಗೆ. ಆದರೆ, ಶಭಾಷ್ ಎಂದು ಬೆನ್ನು ತಟ್ಟೋಣ ವೆಂದರೆ.. ಚಿತ್ರದ ನಿರ್ದೇಶಕನ ಹೆಸರು ಲಭ್ಯವಿಲ್ಲ. ಅಥವಾ ಗೋಸ್ಟ್ ರೈಟರ್ಸ್ ರೀತಿ ಗೋಸ್ಟ್ ಡೈರೆಕ್ಟರ್ ಇರಬಹುದಾ? 

ಕೆಮರಾ ಚಲನವಲನ ನೋಡಿದ ಮೇಲೆ ಕೆಮರಾ ಹಿಡಿದಿರುವುದು ಅತೀಂದ್ರೀಯ ಶಕ್ತಿಯೇ ಎಂಬ ಮಾತು ಕೇಳಿ ಬಂತು. ರಿವೈಂಡ್ ಬಟನ್ ಮಾತ್ರ ನಿಲ್ಲಿಸುವ ಐನಾತಿ ಶಕ್ತಿ ಕೊನೆ ಗಳಿಗೆ ತನಕ ಕೆಮೆರಾ ಪುಡಿ ಮಾಡದೆ ಉಳಿಸಿದ್ದು ಯಾಕೋ? ನಟನೆ ವಿಷ್ಯಕ್ಕೆ ಬಂದರೆ ತಿಗಣೆಗೆ 'ಅಭಿನವ ಕೋಮಲ್' ಎಂದು ಹಿಂದಿನ ಸಾಲಿನಲ್ಲಿ ಕೂತವರು ಕರೆದಿದ್ದು ಸರಿ ಎನಿಸಿತು. 

ಡ್ಯಾಕುಮೆಂಟರಿ ಆಗುವ ಎಲ್ಲಾ ಲಕ್ಷಣಗಳಿಂದ ಹೊರ ಬಂದಿರುವ ಚಿತ್ರ ಇಷ್ಟವಾಗುವುದು, ಸಹಿಸಲು ಸಾಧ್ಯವಾಗುವುದು ಹೊಸ ಪ್ರಯತ್ನ ಎಂದಷ್ಟೇ.. ಚಿತ್ರ ಹೇಗಿದೆ ಹುಡುಕುತ್ತಾ ಹೋದರೆ ಮತ್ತೆ ಒಂಭತ್ತು ಗುಡ್ಡಗಳ ಸಾಲಿನಲ್ಲಿ ನಾವು ಕಳೆದು ಹೋಗುತ್ತೇವೆ ಅಷ್ಟೇ. 

ಹಾರರ್ ಸಿನಿಮಾ ಎಂದುಕೊಂಡು ಚಿತ್ರಮಂದಿರಕ್ಕೆ ಬರುವ ಬದಲು ಟ್ರೆಕ್ಕಿಂಗ್ ಹೋಗುವವರ (ಬರುವವರ?) ಅನುಭವ ಹೇಗಿರುತ್ತೆ ತಿಳಿದುಕೊಳ್ಳಿ. ಒಮ್ಮೆ ಧೈರ್ಯವಾಗಿ Trekking ಹೋಗಿ ಬನ್ನಿ.

Trekking ಹೋಗೋದರಿಂದ ಏನು ಸಿಗುತ್ತೆ ಎಂಬ ಪ್ರಶ್ನೆಗೆ ತಕ್ಷಣದ ಉತ್ತರ ಒಂದೊಳ್ಳೆ ಅನುಭವ. ಈ ಚಿತ್ರದ ಮಟ್ಟಿಗೂ ಅದೇ ಉತ್ತರ ಸೂಕ್ತ. ಒಳ್ಳೆ ಅನುಭವವೋ ಕೆಟ್ಟದ್ದೋ ಅವರವರ ಅನುಭವಕ್ಕೆ ಬಿಟ್ಟಿದ್ದು.

ಚಿತ್ರಕ್ಕೆ ಅನಗತ್ಯ ಹಿನ್ನೆಲೆ ಸಂಗೀತ ಬಳಸಿಲ್ಲ. ಚಿತ್ರದ ಅವಧಿಯನ್ನು ಬೇಕಂತಲೇ ಹಿಗ್ಗಿಸಲಾಯಿತೇ ಎಂಬುದು ಚಿತ್ರ ನೋಡಿದರೆ ಮಾತ್ರ ತಿಳಿಯುತ್ತದೆ.

ಯಾವ ಅರಣ್ಯ ಪ್ರದೇಶ ಎಂಬುದನ್ನು ಬ್ಲರ್ ಮಾಡಿ ತೋರಿಸಿದ್ದು ಏಕೆ? ಎಂಬುದರ ಬಗ್ಗೆ ನನಗೆ ತಕ್ಷಣಕ್ಕೆ ತೋಚಿದ್ದು ಈ ಹಿಂದೆ ನಾ ಬರೆದ ಲೇಖನದಲ್ಲಿದೆ ಓದಿ
http://trektales.blogspot.in/2012/02/blog-post.html


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು