‘ನಾನು ನನ್ನ ಕನಸು’ - ಚಿತ್ರ ತಂಡದೊಂದಿಗೆ ಸಂವಾದ."

ಸಂವಾದ ಯಾವುದರ ಬಗೆಗೆ?

‘ನಾನು ನನ್ನ ಕನಸು’ ಚಿತ್ರದ ಬಗೆಗೆ ಹೆಚ್ಚಿನ ಒತ್ತು ಇರುವಂತೆ ಎಲ್ಲ ಪ್ರಯತ್ನಗಳು ಇರಲಿವೆ.

ಸಂವಾದದ ಸ್ವರೂಪ?

ಹಾಡು ಹಾಡಿ, ಈ ಚಿತ್ರದಿಂದ ಸಂಭಾಷಣೆ ಹೇಳಿ ಇತ್ಯಾದಿ ಒತ್ತಾಯಗಳು ತಪ್ಪಲ್ಲ, ಆದರೆ, ನಮ್ಮ ಪ್ರಯತ್ನ ಚಿತ್ರವೊಂದರ ಬಗೆಗೆ ಮಾತನಾಡುತ್ತಲೇ ನಮ್ಮನ್ನು ನಾವೇ ಒಂದು ಅನುಭವಕ್ಕೆ ಒಪ್ಪಿಸಿಕೊಳ್ಳುವುದು, ಚಿತ್ರದ ಬಗೆಗೆ ಹೆಚ್ಚು ಹೆಚ್ಚು ಅರಿತುಕೊಳ್ಳುವ ಪ್ರಯತ್ನ ಮಾಡುವುದು. ಹೀಗಾಗಿ, ಸಂವಾದಕ್ಕೆ ಒಂದೇ ಕೇಂದ್ರವಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ, ಇಲ್ಲದಿದ್ದರೆ ಸಂವಾದ ಒಂದು ಹೈರಾಣಾಗಿ ಹೋಗುವ ಸಾಧ್ಯತೆ ಹೆಚ್ಚು. ಆದುದರಿಂದ, ಆಯ್ದ ತಂಡ (ಪ್ಯಾನಲ್) ಚರ್ಚೆ, ಸಂವಾದ ನಡೆಸಿಕೊಡುತ್ತದೆ.

ಹಾಗಾದರೆ, ಸಭಿಕರ ಪ್ರಶ್ನೆಗಳು?

ಕೊನೆಯ ಒಂದು ಗಂಟೆ, ಅಂದರೆ ೭.೩೦ ರಿಂದ ೮.೩೦ ರವರೆಗೆ ಮುಕ್ತ ಸಂವಾದಕ್ಕೆ ಪ್ರಯತ್ನಿಸಲಾಗುವುದು. ಸಮಯ, ಸಭಿಕರ ಹಾಗು ಭಾಗವಹಿಸುವವರ ಚಿತ್ತವೃತ್ತಿ ಸಹಕರಿಸಬೇಕಷ್ಟೆ.

ನಮ್ಮ ಪ್ರಶ್ನೆಗಳು?

ಮುಂಚೆಯೇ ಕಳುಹಿಸಿಕೊಡಿ. ಸಂಕ್ಷಿಪ್ತವಾಗಿರಲಿ, ಒಳ್ಳೆಯ ಮಾತುಗಳು, ಸಕಾರಣವಾದ ಅರೋಗ್ಯಕರವಾದ ಟೀಕೆಗಳಿಗೆ ಸ್ವಾಗತ. ವೈಯಕ್ತಿಕವಾದ ಧ್ವನಿಯಿಂದಾಚೆಗೆ ಪ್ರಶ್ನೆಗಳಿರಲಿ. ಇದರಿಂದ ಎಲ್ಲರಿಗೂ ಅನುಕೂಲ. ಆಯ್ದ ಪ್ರಶ್ನೆಗಳಿಗೆ ಸಭೆಯಲ್ಲಿ ಅವಕಾಶ ಮಾಡಿಕೊಡಲಾಗುವುದು.

ಯಾರಿಗೆ ಕಳುಹಿಸಿಕೊಡಬೇಕು?

kiranATsamvaadaDOTcom ಗೆ ಕಳುಹಿಸಿಕೊಡಿ.

ಕಾರ್ಯಕ್ರಮಕ್ಕೆ ಶುಲ್ಕವೇನಾದರೂ ನಿಗದಿ ಮಾಡಲಾಗಿದೆಯೆ?

ಹೌದು: ನಾನು ನನ್ನ ಕನಸು ಚಿತ್ರದ ಟಿಕೆಟ್ ಸೇರಿದಂತೆ, ಸಂವಾದ ಕಾರ್ಯಕ್ರಮಕ್ಕೆ ರೂ ೧೩೦ ನೋಂದಾವಣೆ ಶುಲ್ಕವೆಂದು ನಿಗದಿ ಮಾಡಲಾಗಿದೆ.
ಮುಂಚೆಯೇ ಚಿತ್ರ ನೋಡಿದ್ದು, ಸಂವಾದದಲ್ಲಿ ಭಾಗವಹಿಸುವವರಿಗೆ ರೂ ೧೦೦.೦೦ ಎಂದು ನಿಗದಿಗೊಳಿಸಲಾಗಿದೆ. ಅಂದಾಜು ವೆಚ್ಚ, ಬಾಡಿಗೆಯೂ ಸೇರಿದಂತೆ ಸುಮಾರು ೨೫ರಿಂದ ೩೦ ಸಾವಿರ ರೂಗಳು.

ಏಕೆ ಈ ನೋಂದಾವಣೆ ಶುಲ್ಕ?

ಪ್ರೇಕ್ಷಕಾಂಗಣದ ಬಾಡಿಗೆ, ವೇದಿಕೆಗೆ ಬೇಕಾಗಿರುವ ಸಾಧನಗಳು, ಪೋಸ್ಟರ್, ಆಹ್ವಾನ ಪತ್ರಿಕೆ ಇತ್ಯಾದಿ ಖರ್ಚುಗಳು ವಿಪರೀತ. ಇದನ್ನು ತೂಗಿಸಿಕೊಳ್ಳಬೇಕಾಗುತ್ತದೆ. ಶುಲ್ಕ ಯಾವುದೇ ಲಾಭಾಂಶವಿಲ್ಲದೆ ನಿಗದಿ ಮಾಡಲಾಗಿದೆ.

ಇದೊಂದು ರೀಮೇಕ್ ಚಿತ್ರ- ಸಂವಾದವೇಕೆ?

ರೀಮೇಕ್ ಮೂಲತಃ ವಿಲಕ್ಷಣವಾದದ್ದೆ. ಇನ್ನೂ ಒಂದು ಸೋಜಿಗವಿದೆ: ಕೆ ಬಾಲಚಂದರ್ ನಿರ್ದೇಷನದಲ್ಲಿ ತಮಿಳಿನಲ್ಲಿ ‘ನಾನ್ ಅವನ್ ಇಲ್ಲೈ’ ಎನ್ನುವ ಚಿತ್ರ ಇಪ್ಪತ್ತೈದು ವರ್ಷಗಳನಂತರ, ಪುನಃ ಅದೇ ಭಾಷೆಯಲ್ಲಿ ಹೊಸ ತಲೆಮಾರಿನ ಹುಡುಗರು ಪುನರ್ ನಿರ್ದೇಶಿಸಿದರು. ಯಶಸ್ವಿಯೂ ಆಅಯಿತು. ರಜನಿಕಾಂತ್ ನಟಿಸಿದ್ದ ‘ಬಿಲ್ಲಾ’ ಎಂದೆನ್ನುವ ಚಿತ್ರವೂ ಅದೇ ರೀತಿ ಪುನರ್ ನಿರ್ದೇಶನಕ್ಕೊಳಗಾಯಿತು. ಅಷ್ಟೆಲ್ಲ ಏಕೆ, ಅಂತ ಎಂಬ ಕನ್ನಡ ಚಿತ್ರ ಪುನಃ ಕನ್ನಡದಲ್ಲಿಯೇ ಪುನರ್ ನಿರ್ದೇಶನಕ್ಕೊಳಗಾಗುತ್ತಿದೆ ಎಂಬ ಸುದ್ಧಿಯೂ ಇದೆ. ಆದುದರಿಂದ, ಚರ್ಚೆ, ಸಂವಾದಕ್ಕೆ ಯಾವುದೇ ಚಿತ್ರವಾದರೂ ಹೊರತಲ್ಲ. ಸಂವಾದ.ಕಾಂ ಕಡಿಮೆ ವೆಚ್ಚದ, ಹೊಸಬರ ಚಿತ್ರಗಳಿಗೆ ಅಧಿಕವಾದ ಒತ್ತು ನೀಡಿ ಬೆಂಬಲಿಸುತ್ತದೆ. ಅದರ ಆಳ ಅಗಲವನ್ನು ಅಳೆಯುವ ಗಂಭೀರ ಪ್ರಯತ್ನವಂತೂ ಮಾಡುತ್ತದೆ. ಹಾಗೆಂದ ಮಾತ್ರಕ್ಕೆ ಉಳಿದ ಚಿತ್ರಗಳನ್ನು ತನ್ನ ವ್ಯಾಪ್ತಿಯಿಂದ ಹೊರಗಿಡುತ್ತದೆ ಎಂಬ ಸಂಕುಚಿತತೆಗೆ ತನ್ನನಾಗಲಿ, ಪರ್ಸರವನ್ನಾಗಲಿ ನೂಕಿಕೊಳ್ಳುವುದಿಲ್ಲ.

ಈ ಸಂವಾದದಿಂದ ನನಗೆ ಲಾಭವಾದರೂ ಏನು?

ಚಿತ್ರವನ್ನು ಹೇಗೆಲ್ಲ ನೋಡಬಹುದು- ಎಂಬ ಸೋಜಿಗ, ಶಿಕ್ಷಣದ ಗಳಿಗೆಗಳು ನಿಮ್ಮದಾಗುತ್ತವೆ. ನೀವು ಹೆಚ್ಚು ಪ್ರಬುದ್ಧವಾಗಿ ಆಯ್ಕೆ ಮಾಡಿಕೊಳ್ಳಬಲ್ಲಿರಿ. ನಮ್ಮನ್ನು ಪ್ರಬುದ್ದರನ್ನಾಗಿಸಬಲ್ಲಿರಿ. ಕಲಿತು ಕಲಿಯುವ ಲಾಭ ಯಾರಿಗೆ ಬೇಕಿಲ್ಲ?

ನೋಂದಾಯಿಸಿಕೊಳ್ಳುವುದು ಎಲ್ಲಿ?

ಅದಕ್ಕಾಗಿಯೇ ಒಂದು ಪುಟ ಮಾಲಾಗಿದೆ. ಆ ಪುಟ ಇಲ್ಲಿದೆ.

ಕಾರ್ಯಕ್ರಮಗಳಲ್ಲಿ ಬದಲಾವಣೆಗಳಾದರೆ?

ಅದಕ್ಕಾಗಿಯೆ ನಿಮ್ಮ ಸಂಪರ್ಕಕ್ಕಾಗಿ ಮಾಹಿತಿ ಕೇಳುವುದು. ದಯವಿಟ್ಟು ಸರಿಯಾದ ಮಾಹಿತಿ ನೀಡಿ. ಕರ್ಯಕ್ರಮಗಳಲ್ಲಿ ಅದಲು ಬದಲಾದರೆ, ಬದಲಾವಣೆಗಳಾದರೆ ನಿಮಗೆ ಮುಂಚೆಯೇ ತಿಳಿಸಲಾಗುವುದು: ೧) ಈ ಮೈಲ್ ಮೂಲಕ ೨) ಎಸ್ ಎಂ ಎಸ್ ಮೂಲಕ.

ಇನ್ನೂ ಹೆಚ್ಚಿನ ವಿವರಗಳು ಬೇಕಿದ್ದರೆ?

ದಯವಿಟ್ಟು ಸಂಪರ್ಕಿಸಿ:
೧) ಎಂ ಕಿರಣ್ - 9731755966
೨) ಅರೆಹಳ್ಳಿ ರವಿ - 9900439930

ಯಾರು ಯಾರು ಇರುತ್ತಾರೆ? ಎಂದು? ಎಲ್ಲಿ?

(ಈ ವಿವರಗಳು ಅಂತಿಮ ಕ್ಷಣದ ಬದಲಾವಣೆ ಹೊರತು ಪಡಿಸಿ)

ಕಾರ್ಯಕ್ರಮದ ವಿವರ

ಮೇ 23

ಸಂವಾದದಲ್ಲಿ:

ಪ್ರಕಾಶ್ ರೈ
ಬಿ ಸುರೇಶ್
                 ರಾಜೇಶ್
                 ಅನಂತ ಅರಸ್

‘ನಾನು ನನ್ನ ಕನಸು’

ಮೇ 23

ಸ್ಥಳ:

ಯವನಿಕ ಸಭಾಂಗಣ
                 ನೃಪತುಂಗ ರಸ್ತೆ

ಪ್ರಕಾಶ್ ರೈ ಹಾಗು ನಾವುಪ್ರಕಾಶ್ ರೈ ಹಾಗು ನಾವು

ಮೇ 23

ದಿನಾಂಕ-ಸಮಯ
೨೩-೦೫-೨೦೧೦
ಸಂಜೆ: ೫.೩೦ಕ್ಕೆ